×

HCG in News

ಕೊರೊನಾ ಸೋಂಕಿಗೆ ಪ್ಲಾಸ್ಮಾ ಚಿಕಿತ್ಸೆ ಪ್ರಯೋಗಕ್ಕೆ ರಾಜ್ಯದ ವೈದ್ಯ ಡಾ.ವಿಶಾಲ್‌ರಾವ್‌ಗೆ ಅನುಮತಿ..!

ವಿಶ್ವದೆಲ್ಲೆಡೆ ಕೊರೊನಾ ಅಟ್ಟಹಾಸ ಮಾಡೋಕೆ ಶುರು ಮಾಡಿ 4 ತಿಂಗಳಾಯ್ತು. ಆದ್ರೆ ವೈದ್ಯಕೀಯ ಲೋಕ ಇನ್ನೂ ಸರಿಯಾದ ಔಷಧಿ ಅಥವಾ ವ್ಯಾಕ್ಸಿನ್‌ ಪತ್ತೆ ಹಚ್ಚೋಕೆ ಸಕ್ಸಸ್‌ ಆಗಿಲ್ಲ. ಜಗತ್ತಿನ ಹಲವು ದೇಶಗಳಲ್ಲಿ ಈ ಬಗ್ಗೆ ಸಂಶೋಧನೆ ನಡೀತಾನೇ ಇದೆ. ಇದೀಗ ನಮ್ಮ ರಾಜ್ಯದಿಂದ್ಲೇ ಕೊರೊನಾ ಚಿಕಿತ್ಸೆಗೆ ಸಂಬಂಧಪಟ್ಟ ಹಾಗೆ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ. ಅದೇನು ಅಂದ್ರೆ ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ICMR ರಾಜ್ಯ ಸರ್ಕಾರದ ಪ್ರಸ್ತಾವನೆಯೊಂದಕ್ಕೆ ಪರ್ಮಿಷನ್‌ ಕೊಟ್ಟಿದೆ. ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಕ್ಲಿನಿಕಲ್‌ ಟ್ರಯಲ್‌ಗೆ ಅನುಮತಿ ನೀಡಿದೆ.

ಕೆಲ ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರ ಪ್ಲಾಸ್ಮಾ ಥೆರಪಿ ಮೂಲಕ ಕೊರೊನಾ ಸೋಂಕಿತರ ಚಿಕಿತ್ಸೆಗೆ ಅವಕಾಶ ಕಲ್ಪಿಸುವಂತೆ ICMRಗೆ ಮನವಿ ಮಾಡಿತ್ತು. ಬೆಂಗಳೂರು ಇನ್​ಸ್ಟಿಟ್ಯೂಟ್​ ಆಫ್​ ಆಂಕಾಲಜಿ (ಹೆಚ್‌ಸಿಜಿ)ಯ ವೈದ್ಯ ಡಾ. ವಿಶಾಲ್​ ರಾವ್​ ಮತ್ತವರ ತಂಡ ಸಲ್ಲಿಸಿದ್ದ ಪ್ರಸ್ತಾವನೆ ಆಧರಿಸಿ ರಾಜ್ಯ ಸರ್ಕಾರ, ICMRನ ಅನುಮತಿ ಕೋರಿತ್ತು. ಅದ್ರಂತೆ ಇವತ್ತು ICMR ಹಾಗೆಯೇ ಕೇಂದ್ರ ಸರ್ಕಾರದ ಸೆಂಟ್ರಲ್ ಡ್ರಗ್ ಸ್ಟ್ಯಾಂಡರ್ಡ್‌ ಕಂಟ್ರೋಲ್  ಆರ್ಗನೈಸೇಶನ್‌ ಡಾ.ವಿಶಾಲ್‌ ರಾವ್‌ ಹಾಗೂ ಅವರ ಟೀಮ್‌ಗೆ ಕ್ಲಿನಿಕಲ್‌ ಟ್ರಯಲ್‌ಗೆ ಪರ್ಮಿಷನ್‌ ಕೊಟ್ಟಿದೆ.

ಮನುಷ್ಯನ ದೇಹದೊಳಗೆ ವೈರಸ್‌ನ ಕೊಲ್ಲುವ ಇಂಟರ್ ಫೆರೋನ್ (ಪ್ರೊಟೀನ್) ಪದಾರ್ಥದ ಕಣಗಳು ತನ್ನಿಂದ ತಾನೇ ಬಿಡುಗಡೆಯಾಗುತ್ವೆ. ಆದ್ರೆ ಕೋವಿಡ್ 19 ಕೇಸ್‌ನಲ್ಲಿ ಈ ಸೆಲ್ಸ್ ಬಿಡುಗಡೆ ಆಗಲ್ಲ. ಯಾಕೆಂದ್ರೆ ಕೋವಿಡ್ ಪೀಡಿತರ ದೇಹದಲ್ಲಿ ಇಮ್ಯುನಿಟಿ ಪವರ್‌ ಅಂದ್ರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತೆ. ಆದ್ರೂ ಕೋವಿಡ್ 19 ರೋಗಿಗಳನ್ನ ಗುಣಪಡಿಸುವಲ್ಲಿ ಈ ಇಂಟರ್ ಫೆರೋನ್ ಕಣಗಳು ತುಂಬಾ ಪರಿಣಾಮಕಾರಿ ಅನ್ನೋ ವಾದ ಡಾ.ವಿಶಾಲ್‌ ರಾವ್‌ ಅವ್ರದ್ದು. ಸಾಮಾನ್ಯ ಪರೀಕ್ಷೆ ವೇಳೆ ಮನುಷ್ಯನ ರಕ್ತದ ಮಾದರಿ ಪರೀಕ್ಷೆ ನಡೆಸಲಾಗುತ್ತೆ. ಈ ವೇಳೆ ಸಿಗೋ ಮಾಹಿತಿ ಮೇರೆಗೆ ಸೆಲ್ಸ್ ಹಾಗೂ ಇಂಟರ್ ಫೆರೋನ್ ಅಂಶವನ್ನ ಹೊರತೆಗೀತಾರೆ. ಈ ಎರಡೂ ಅಂಶಗಳ ಮಿಶ್ರಣದಿಂದ ಕೋವಿಡ್ 19 ರೋಗಿಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು ಅನ್ನೋ ವಿಶ್ವಾಸ ಡಾ.ವಿಶಾಲ್‌ ರಾವ್‌ ಅವ್ರದ್ದು.

ಈ ಟ್ರೀಟ್ಮೆಂಟ್‌ನಲ್ಲಿ ಸೈಟೋಕಿನ್ಸ್ ಅಥವಾ ಇಂಟರ್ ಫೆರೋನ್ ಮಿಶ್ರಣ ತಯಾರಿಸಿ ಅದನ್ನ ಕೋವಿಡ್ 19 ರೋಗಿಯ ದೇಹಕ್ಕೆ ಇಂಜೆಕ್ಷನ್‌ ಮೂಲಕ ನೀಡಿ ರೋಗ ನಿರೋಧಕ ಶಕ್ತಿಯನ್ನ ಮತ್ತೆ ಸ್ಟ್ರಾಂಗ್‌ ಆಗೋ ಹಾಗೆ ಮಾಡ್ಲಾಗುತ್ತೆ. ಈ ತಿಂಗಳಿಂದ್ಲೂ ಡಾ.ವಿಶಾಲ್ ರಾವ್‌ ಮತ್ತವರ ಟೀಂ ಪ್ರಯೋಗ ನಡೆಸಿತ್ತು. ಬಳಿಕ ಅದನ್ನ ರಾಜ್ಯ ಸರ್ಕಾರಕ್ಕೂ ಸಲ್ಲಿಸಿತ್ತು. ಇದೀಗ ಕ್ಲಿನಿಕಲ್ ಟ್ರಯಲ್‌ಗೆ ಪರ್ಮಿಷನ್‌ ಸಿಕ್ಕಿದೆ. ಒಂದು ವೇಳೆ ಈ ಟ್ರಯಲ್‌ನಲ್ಲಿ ನಿರೀಕ್ಷಿತ ಫಲ ಸಿಕ್ಕಿದ್ರೆ ಕೊರೊನಾ ಸೋಂಕಿತರಿಗೆ ಪೂರಕ ಚಿಕಿತ್ಸೆ ನೀಡೋಕೆ ಸಾಕಷ್ಟು ಅನುಕೂಲ ಆಗ್ಲಿದೆ.